ಎಲ್ಲ ಊರಂತೆ ನಮ್ಮ ಊರಲ್ಲೂ ಒಂದು ಸರಕಾರಿ ಪ್ರೌಢಶಾಲೆ ಇದೆ, ಇಲ್ಲೂ ಅದೇ ಸರಕಾರಿ ಬಣ್ಣದ ಕಟ್ಟಡಗಳು, ಡೆಸ್ಕಗಳು/ಬೆಂಚುಗಳು ,ಗಂಟೆಗಳು, ಸರಕಾರಿ ಪ್ರಾಧ್ಯಾಪಕರುಗಳು, ಬಡ ಕುಟುಂಬದಿಂದ ಬರುವ ಮಕ್ಕಳುಗಳು ಅದರೊಂದಿಗೆ ಹೆಸರಿಗೋಸ್ಕರ ಇರುವ SDMC( ಸ್ಕೂಲ್ ಡೆವೆಲಪ್ ಮಾನಿಟರಿಂಗ್ ಸಮಿತಿ) etc . ಇದು ಹಳ್ಳಿ ಹಳ್ಳಿಯ ಸರಕಾರಿ ಶಾಲೆಯ ಕಥೆ , ಇದರಲ್ಲೇನು ವಿಶೇಷ ಅಂತೀರಾ ?
ನಾನು ಶಿಕ್ಷಣ ಪಡಿಯುವಾಗ ಮುಖ್ಯ ಉಪಾಧ್ಯಾಯನೆಂದರೆ ಆತ ಶಾಲೆಯಲ್ಲಿ ಹಿರಿಯ ಅಧ್ಯಾಪಕ ಮತ್ತು ೧-೨ ವರ್ಷದಲ್ಲಿ ನಿವೃತ್ತಿ ಅಂಚಿನಲ್ಲಿ ಇರುತ್ತಿದ್ದರು. ಕಾಲ ಬದಲಾಗಿದೆ, ಏಕೆಂದರೆ ಈ ಶಾಲೆಗೇ ೬ ವರ್ಷದ ಮೊದಲು ೨೬ ವರ್ಷದ ನ ಯುವಕನನ್ನು ಮುಖ್ಯ ಉಪಾಧ್ಯಾಯನಾಗಿ ನಮ್ಮ ಶಿಕ್ಷಣ ಇಲಾಖೆ ಯೋಜಿಸಿತು. ಅವರನ್ನು ಮೊದಲು ಭೇಟಿ ಮಾಡಿದಾಗ ಅವರು ಯಾವ ರೀತಿ ನಮ್ಮ ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಬಹುದು ವಿಚಾರವಾಗಿ ತುಂಬಾ ಕೂಲಂಕುಷ ಚರ್ಚೆ ಮಾಡಿದರು. ಅವರ ಕನಸಿನ ಸರಕಾರಿ ಶಾಲೆ ಯಾವುದೇ ಖಾಸಗಿ ಪ್ರೌಢಶಾಲೆಗೆ ಕಡಿಮೆ ಇರಬಾರದು ಎಂಬ ದೂರದ್ರಷ್ಟಿಯನ್ನು ಇಟ್ಟುಕೊಂಡು ,ರೂಪುರೇಷೆಯನ್ನು ತಯಾರಿಸಿದ್ದರು.
ಈ ಶಾಲೆಯಲ್ಲಿ ಕಲಿಕೆಯೊಂದಿಗೆ, ಅನೇಕ ಪಠ್ಯೇತರ ಕಾರ್ಯಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕ್ಕೊಂಡು, ತಾಲೂಕು , ಜಿಲ್ಲಾ, ರಾಜ್ಯ ಮಟ್ಟದ ಅನೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಲು ಪ್ರಾಧ್ಯಾಪಕರು ಮಾರ್ಗದರ್ಶನ ನೀಡುತ್ತಿದ್ದಾರೆ . ಈ ಎಲ್ಲ ಪ್ರಯತ್ನ ಶಾಲೆಗೇ ೧೦ ತರಗತಿ ಪರೀಕ್ಷೆಯಲ್ಲಿ ೧೦೦% ಫಲಿತಾಂಶವೇನು ಬರಲಿಲ್ಲ, ಯಾಂಕೆಂದರೆ ಇಲ್ಲಿಗೆ ಬರುವ ೯೦% ಮಕ್ಕಳ ತಂದೆ ತಾಯಿ ಅನಕ್ಷರಸ್ತರು ಅಥವಾ ಕಡಿಮೆ ವಿದ್ಯಾಭ್ಯಾಸ ಹೊಂದಿದವರು ಮತ್ತು ಮನೆಯ ವಾತಾವರಣ ಕೂಡ ಈ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಖಾಸಗಿ ಶಾಲೆಯವರು ಉತ್ತಮ ಅಂಕ ಪಡೆಯುವ ಸಾಮರ್ಥ್ಯ ಇರುವ ಮಕ್ಕಳನ್ನು ಮಾತ್ರ ತಮ್ಮ ಶಾಲೆಗೆ ಸೇರಿಸಿಕೊಂಡು, ಮಕ್ಕಳು ಖಾಸಗಿ ಟ್ಯೂಷನ್ ಪಡೆದು ೧೦೦% ಫಲಿತಾಂಶ ಪಡೆಯುವುದು ಆಸಾದ್ಯವೇನಲ್ಲ.
ಇನ್ನು ಪುನಃ ನಮ್ಮ ಸರಕಾರಿ ಶಾಲೆಯ ವಿಚಾರಕ್ಕೆ ಬರೋಣ, ಕಳೆದ ಕೆಲವು ವರ್ಷದಿಂದ ಇಲ್ಲಿ ವಿದ್ಯಾ ರ್ಥಿನಿಯರ ತರಗತಿಗೆ ಗೈರುಹಾಜರು ಸಂಖ್ಯೆ ಹೆಚ್ಚಾಗಿದೆ , ಕೆಲವು ವಿದ್ಯಾರ್ಥಿನಿಯರ ಶಾಲೆಯನ್ನು ಕೂಡ ಬಿಟ್ಟರು. ಸ್ವಲ್ಪ ದಿನದಲ್ಲೇ ಶಿಕ್ಷಕರಿಗೆ ಇದರ ಮೂಲ ಕಾರಣ ಅರಿವಾಹಿತು. ವಿದ್ಯಾರ್ಥಿನಿಯರು ತಮ್ಮ ಮುಟ್ಟಿನ ಕಾಲಚಕ್ರದಲ್ಲಿ ಶಾಲೆಯಲ್ಲಿ ಅನೇಕ ತೊಂದರೆ ಅನುಭವಿಸುತ್ತಿದರು. ಶಿಕ್ಷಕರು ಕೆಲವೊಮ್ಮೆ ಮಕ್ಕಳಿಗೆ ಮುಖ್ಯ ಪ್ರಾಧ್ಯಾಪಕರ ಕೊನೆಯಲ್ಲಿ ವಿಶ್ರಾಂತಿ ತೆಗೆಯಲು ಹೇಳುತ್ತಿದ್ದರೆ, ಕೆಲವು ಸಲ ಅವರನ್ನು ರಿಕ್ಷಾದಲ್ಲಿ ಕೂರಿಸಿ ಮನೆಗೆ ಕಲಿಸಿಕೊಡುತ್ತಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆ ಇಲ್ಲದೆ ಇರುವುದರಿಂದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಸ್ಯಾನಿಟರಿ ನಾಪ್ಕಿನ್ ಸುಡುವ ಎಲೆಕ್ಟ್ರಿಕ್ ಮಷೀನನ್ನು ವ್ಯವಸ್ಥೆಯನ್ನು ಪ್ರಾದ್ಯಾಪಕರು ಮಾಡಿದ್ದರು. ಆದರೆ ಇದು ವಿದ್ಯಾರ್ಥಿನಿಯರ ಗೈರುಹಾಜರಿ ಕಡಿಮೆ ಮಾಡಲು ಸಹಕರಿಸಲಿಲ್ಲ.
ಒಂದು ದಿವಸ ನನ್ನೊಂದಿಗೆ ಮುಖ್ಖ್ಯೋಪಾದ್ಯಾಯರು ಈ ವಿಷಯಯವನ್ನು ಪ್ರಸ್ತಾಪಿಸಿದರು. ಸಮಸ್ಯೆಯ ಗಂಭೀರತೆಯನ್ನು ಅರಿತು ನಾನು ನನ್ನ ಪರಿಚಯದ ಅನೇಕರಲ್ಲಿ ಈ ವಿಷಯ ಪ್ರಸ್ತಾಪಿಸಿದೆ, ಆದರೆ ಎಲ್ಲೂ ಧನಾತ್ಮಕ ಉತ್ತರ ಸಿಗಲಿಲ್ಲ. ಆದರೆ ಈ ವಿಚಾರವನ್ನು ನನ್ನ ಗೆಳೆಯೆ ಜೀಶಾನ್ ರಮ್ಲಾನ್ ಬಳಿ ಈ ವಿಷಯ ಪ್ರಸ್ತಾವಿಸಿದಾಗ ಅವರು ತಕ್ಶಣ ತಮ್ಮ ರಮ್ಲಾನ್ ಟ್ರಸ್ಟಿನಿಂದ ಬೇಕಾದ ಸಹಾಯ ನೀಡುವ ಆಶ್ವಾಸನೆ ಕೊಟ್ಟು ಶಾಲೆಗೆ ಭೇಟಿ ನೀಡಿದರು . ಶಾಲೆಗೇ ಹೊಸತಾಗಿ ಸರಕಾರದ ಅನುದಾನದಿಂದ ಕಟ್ಟಿದ ಕಟ್ಟಡದಲ್ಲಿ ಒಂದು ಕೋಣೆಯನ್ನು " ಭಾವಿಕ" ಎಂಬ ಹೆಸರಿತ್ತು ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿಯಾಗಿ ಮಾರ್ಪಾಡು ಗೊಳಿಸಿದರು. ರಮ್ಲಾನ್ ಟ್ರಸ್ಟ್ ನ ಸಹಾಯದಿಂದ ಕೋಣೆಯೊಳಗೆ ಒಂದು ಶೌಚಾಲಯನ್ನು ನಿರ್ಮಾಣ ಮಾಡಿದರು. ಈ ವಿಶ್ರಾಂತಿ ಕೊಠಡಿಯಲ್ಲಿ ಮಲಗಲು ಮಂಚ , ಸಣ್ಣ ಪುಸ್ತಕಾಲಯ, ಕುಡಿಯುವ ನೀರು, ಪ್ರೇರಣಾತ್ಮಕ ಬರವಣಿಗೆಯೊಂದಿಗೆ ಅಚ್ಚುಕಟ್ಟಾಗಿ ಕೋಣೆಯನ್ನು ನಿರ್ಮಿಸಿ ೨ ಸೆಪ್ಟೆಂಬರ್,೨೦೧೭ಕ್ಕೆ ಉದ್ಘಾಟನೆಯಾಯಿತು.
ಇದು ಅನೇಕರಿಗೆ ದೊಡ್ಡ ಕ್ರಾಂತಿಕಾರಿ ಬದಲಾವಣೆಯಂತೆ ಕಾಣದೆ ಇರಹಬಹುದು, ಆದರೆ ನೀವು ನಿಮ್ಮೂರ/ ಹಳ್ಳಿಯ ಶಾಲೆಗೇ ಭೇಟಿ ಕೊಟ್ಟರೆ ಅಲ್ಲೂ ಈ ಸಮಸ್ಯೆ ನೀವು ಗಮನಿಸ ಬಹುದು. ಖಾಸಗಿ ಶಾಲೆಗಳಲ್ಲಿ ಇದೊಂದು ಮೂಲಭೂತ ಸೌಕರ್ಯ, ಆದರೆ ಇನ್ನೂ ಶೋಚಾಲಯವನ್ನೇ ಕಾಣದ ಅದೆಷ್ಟೋ ಶಾಲೆಗಳು ನಮ್ಮ ದೇಶದಲ್ಲಿ ಇರುವಾಗ, ನಮ್ಮ ರಾಜಕೀಯ ನಾಯಕರಿಗೆ, ಸಮಾಜಕ್ಕೆ ಇದೊಂದು ಸಮಸ್ಯೆಂದು ಗೋಚರಿಸದೆ ಇರಬಹುದು. ಈ ಶಾಲೆಯ ಪ್ರಾಧ್ಯಾಪಕ ಮಿತ್ರರು ಈ ಯೋಜನೆಯಿಂದ ಸಮಾಜದಲ್ಲಿ ನಿಜವಾಗಲೂ " ಭೇಟಿ ಪಡಾವೋ ಭೇಟಿ ಬಚಾವೋ" ಮಾತಿಗೆ ಉದಾಹರಣೆ ನೀಡಿದ್ದಾರೆ. ಇದನ್ನು ನೋಡಿ ಇನ್ನೂ ಅನೇಕ ಸರಕಾರಿ ಶಾಲೆಗಳಲ್ಲಿ ಇಂತ ಮೂಲಭೂತ ಸೌಕರ್ಯ ನಿರ್ಮಿಸುವಲ್ಲಿ " ರಮ್ಲಾನ್ ಟ್ರಸ್ಟ್" ನಂತ ಅನೇಕ ಸಂಸ್ಥೆಗಳು ಮುಂದೆ ಬಂದು, ಸಮಾಜದಲ್ಲಿ ಹೆಣ್ಣು ಮಕ್ಕಳು ಮುಂದೆ ಬರಲು ಸಹಕಾರ ನೀಡುವ ಅಗತ್ಯ ಇದೆ.
ಪಾವೂರು ಪ್ರೌಢಶಾಲೆ ಅಧ್ಯಾಪಕರುಗಳು
reference post :




