ಒಂದಾನೊಂದು ಕಾಲದಲ್ಲಿ ಭಾರತವೆಂಬ ರಾಜ್ಯದಲ್ಲಿ ರಾಜರು, ರಾಣಿಯರು, ಮಂತ್ರಿಗಳು ಅಂದಿನ ದಿನದ VVIP ಗಳು, ಇಂದು ಮುಖ್ಯ ಮಂತ್ರಿಗಳು , ಮಂತ್ರಿಗಳು , ಶಾಸಕರು ಅವರ ಸ್ಥಾನವನ್ನು ಪದೆದ್ದಿದರೆಯೇ ? ಭಾರತವೊಂದು ಪ್ರಜಾಪ್ರಭುತ್ವ ದೇಶ, ಆದರೆ VVIP ಗೆ ಬೇರೆ ಸ್ಥಾನಮಾನ , ಸಾಮಾನ್ಯ ಜನರಿಗೆ ಬೇರೆ ರೀತಿಯದೇ? ನಮ್ಮ ಸಂವಿಧಾನದಲ್ಲಿ ಎಲ್ಲ್ಲೂ ಇದರ ಬಗ್ಗೆ ಉಲ್ಲೇಕ ಮಾಡಿಲ್ಲ, ಉನ್ನತ ನ್ಯಾಯಾಲಯ ಯಾವುದೇ ತೀರ್ಪು ಕೊಟ್ಟಿಲ್ಲ, ಮತ್ತೆ ಈ ರಾಜಕೀಯ ವ್ಯಕ್ತಿಗಳಿಗೆ, ಚಲನಚಿತ್ರ ನಟ ನಟಿಯರಿಗೆ,ಶ್ರೀಮಂತರಿಗೆ ಏಕೆ ಈ VVIP ಧೋರಣೆ?
ನಾನು ನಾನು ಒಂದು ದಿನ ಮುಂಬೈಯ ವಿಮಾನ ನಿಲ್ದಾಣದಲ್ಲಿ ತಂಗಿದ್ದಾಗ, ಆಡಳಿತ ಪಕ್ಷದ ಉನ್ನತ ನಾಯಕರೊಬ್ಬರನ್ನು ನೋಡಿದೆ, ಅವರ ಅಕ್ಕ ಪಕ್ಕ ೪ ಜನ , ಒಬ್ಬರುಬ್ಯಾಗ್ ಹಿಡಿದುಕೊಳ್ಳಲು, ಒಬ್ಬರು ಟಿಕೆಟ್ ಹಿಡಿದುಕೊಂಡು ಓಡುತಿದ್ದನು, ಇನ್ನಿಬರು ಅಥಿತಿ ಸತ್ಕಾರ ಮಾಡುತಿದ್ದರು. ಇನ್ನೊಂದು ಸನ್ನಿವೇಶದಲ್ಲಿ ಕನ್ನಡದ ಪ್ರಖ್ಯಾತ ನಟ ನಟಿಯರಿಬ್ಬರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಳಗೆ ಬಂದ ಕೂಡಲೇ ಅವರಿಗೆ ವಿಶೇಷ ಅಥಿತಿ ಸತ್ಕಾರ ಮೂಲಕ ಯಾವುದೇ ಸಾಮಾನ್ಯ ಜನರ ರೀತಿಯ ಕಾರ್ಯ ಮಾಡದೇ, ನೆರವಾಗಿ ಬಧ್ರತೆ ಸಿಬ್ಬಂದಿಯತ್ರ ತಲುಪಿಸುತ್ತಾರೆ. ಇಂತ ಅನೇಕ ಸನ್ನಿವೇಶಗಳು ನಾವು ನಮ್ಮ ಜನ ಜೀವನದಲ್ಲಿ ನೋಡುತ್ತ ಬಂದಿದ್ದೇವೆ.
VVIP ಸಂಸ್ಕ್ರತಿಯ ಈ ಕೆಂಪು ದೀಪದ ಕಾರುಗಳು, ವಿಶೇಷ ರೀತಿಯ ದೇವಸ್ಥಾನದ ಭೇಟಿ,ಜನ ಸಾಮಾನ್ಯನಿಗೆ ಸಿಗದ ಝೆಡ್ ರೀತಿಯ ಬದ್ರತ ವ್ಯವಸ್ತೆ ಈ VVIP ಗೆ ಯಾಕೆ? ಯಾವಾಗ ನಮ್ಮ ರಾಜಕೀಯ ವ್ಯಕ್ತಿಗಳು ತಮ್ಮ ಮತ್ತು ಸಾಮಾನ್ಯ ಜನರ ನಡುವಿನ ಅಂತರ ಕಡಿಮೆ ಮಾಡಲು ಪ್ರಯತ್ನ ಮಾಡುತಿದ್ದಾರೆಯೇ ?
ಇದಕಿಂತಲೂ ಕೀಳು ಮಟ್ಟದ VVP ಪದ್ದತಿಯೆಂದರೆ ಈ ರಾಜಕೀಯ ವ್ಯಕ್ತಿಗಲಿಗೊಸ್ಕರ ಸುರಕ್ಷತೆ ಹೆಸರಲ್ಲಿ ರಸ್ತೆ ತಡೆ ಮಾಡಿ ಅವರು ಸುಲಬ ರೀತಿಯಲ್ಲಿ ರಸ್ತೆಯಲ್ಲಿ ಹೋಗಲು ಅನುವು ಮಾಡಿಕೊಡುವುದು. ಕೆಂಪು ದೀಪವನ್ನು ಒಬ್ಬ ಪಂಚಾಯತ್ ಅದ್ಧ್ಯಕ್ಷನಿಂದ ದೇಶದ ಪ್ರಧಾನ ಮಂತ್ರಿವರೆಗೂ ಉಪಯೋಗಿಸುತ್ತಾರೆ, ಆಂಬುಲೆನ್ಸ್ , ಪೋಲಿಸ್ ಎಲ್ಲರು ಅಳವಡಿಸಿ, ಅದರ ನಿಜವಾದ ಅರ್ಥ ಮರೆಯುವಂತೆ ಮಾಡಿದ್ದರೆ
A P J ಕಲಾಮ್ ನಂತಹ ಮಹನೀಯರು ಈ ಬಾರತದಲ್ಲಿ , ಇಂದಿನ ರಾಜಕೀಯ ವ್ಯಕ್ತಿಗಳಿಗೆ ಸಡ್ಡು ಹೊಡೆಯುವಂತೆ ಸಾಮಾನ್ಯ ಪ್ರಜೆಯಾಗಿ ಎಲ್ಲರೊಂದಿಗೆ ಬೆರೆತು ತೋರಿಸಿ ಕೊಟ್ಟಿದಾರೆ. ಆದರೆ ನಮ್ಮ ರಾಜಕೀಯ ಪುಡಾರಿಗಳಿಗೆ VVIP ಸಂಸ್ಕ್ರಥಿಯೇ ಪ್ರಿಯ, ಅಲ್ಲೊಮ್ಮೆ ಇಲ್ಲೊಮ್ಮೆ ನಮ್ಮ ಮಾದ್ಯಮಗಳು ಈ ವಿಚಾರ ಸುದ್ದಿ ಬಿಸ್ತಾರ ಮಾಡಿ ರಾಜಕೀಯ ವ್ಯಕ್ತಿಗಳನ್ನು ಪ್ರಶ್ನಿಸುತ್ತಾರೆ, ಅದಾರೆ ಇದರ ಬಗ್ಗೆ ಉನ್ನತ ನ್ಯಾಯಾಲಯ ರಾಜಕೀಯ ಪುಡಾರಿಗಳಿಗೆ ಛೀಮಾರಿ ಹಾಕಿ , ಈ VVIP ಸಂಸ್ಕ್ರತಿ ಭಾರತದಲ್ಲಿ ಕೊನೆಗಾನಲಿ.
ಡೆಲ್ಲಿ ರಾಜ್ಯದಲ್ಲಿ ಜನ ಸಾಮಾನ್ಯ ತನ್ನ ಮತದ ಮಹತ್ವವನ್ನು ಎಲ್ಲ ರಾಜಕೀಯ ಪಕ್ಷಗಳಿಗೆ ತೋರಿಸಿಕೊಟ್ಟಿದೆ, ಮೊದ್ದೊಂದು ದಿನ ಪ್ರಗಥಿಪಥದಲ್ಲಿರುವ ಭಾರತ ದೇಶದ ಜನ ಸಮಾನ್ಯ ಈ VVIP ಬಗ್ಗೆ ಸಿಡಿದೇಳುತ್ತಾನೆ.ನಾವೆಲ್ಲ ಸೇರಿ ಈ VVIP ಸಂಸ್ಕೃತಿಯನ್ನು ವಿರೋದಿಸೋನ.