ಮುಂಜಾನೆ ೮ ಘಂಟೆಗೆ ಬೆಂಗಳೂರು ದರ್ಶನಕ್ಕೆ ಹೊರಟಾಗ ಕಾರ್/ ಬೈಕ್ನಲ್ಲಿ ಹೋಗದೆ ಸಾರ್ವಜನಿಕ ಬಸ್/ಮೆಟ್ರೋ ದಲ್ಲಿ ಟ್ರಾವೆಲ್ ಮಾಡುವುದೆಂದು ತೀರ್ಮಾನ ಮಾಡಿ ಮನೆಯಿಂದ ಹೊರಟೆ. ಖಾಲಿ ಬಸ್, ಖಾಲಿ ರೋಡ್, ಲೇಡಿ ಕಂಡಕ್ಟರ್ ಮತ್ತು ಮಾತುಗಾರ ಚಾಲಕನೊಂದಿಗೆ ನನ್ನ ಜನಮನ ಸವಾರಿ ಪ್ರಾರಂಭ.


ಮೆಟ್ರೋ ಪ್ರಯಾಣದುದ್ದಕ್ಕೂ ನಾನು ಎಲ್ಲರನ್ನು ಗಮನಿಸುತ್ತಿದೆ - ear ಫೋನ್ ಆಕಿಕೊಂಡು ಬ್ಯುಸಿ ಆಗಿರುವ ಲಲನೆಯರು, ಆಯಾಸತಿಂದ ನಿದ್ರೆ ಮಾಡುವ ಗಂಡು ಹುಡುಗರು, ಪಿಕ್ನಿಕ್ ಸ್ಪಾಟ್ ತರ ಕುಟುಂಬಗಳ ಮೆಟ್ರೋ ಪ್ರಯಾಣ, ಮಕ್ಕಳ ಓಡಾಟ / ಕಿರುಚಾಟ , ಜೋಡಿ ಹಕ್ಕಿಗಳ ತುಂಟಾಟ, ಹಿರಿ ವಯಸ್ಸಿಗರ ಚರ್ಚೆಗಳು, ಮಯಿಳಾ ಮಣಿಗಳ ಸೀರೆ/ ಬಂಗಾರದ ಮಾತುಗಳು ತುಂಬಾ ಸ್ವಾರಸ್ಯಕರವಾಗಿತ್ತು. ಇದೆಲ್ಲದೊರೊಂದಿಗೆ ಯಾವ ರೀತಿ ಮೆಟ್ರೋದ ಸೆಕ್ಯೂರಿಟಿ ಕೆಲಸ ಮಾಡುವ ಕಾರ್ಮಿಕರಿಗೆ ಅವರ ಕಂಟ್ರಾಕ್ಟರ್ ಯಾವ ರೀತಿ ಹಕ್ಕಿನ ವಾರದ ರಜೆ ನೀಡದೆ, ಗಳಿಕೆ ರಜೆಯನ್ನು ಮರೀಚಿಕೆ ಮಾಡಿ, OT ಮಾಡಿಯೂ ಸರಿಯಾದ ಓಟ್ ಸಂಬಳ ಕೊಡದೇ ಪೀಡನೆ ಕೊಡುತ್ತಿದ್ದಾರೆ ಎನ್ನುವ ವಿಚಾರ ಕೂಡ ತಿಳಿಯಿತು
30 ನಿಮಿಷದಲ್ಲಿ ಇಲೆಕ್ಟ್ರಾನಿಕ್ ಸಿಟಿಯಿಂದ MG ರೋಡ್ ಕಡೆಗೆ ಟ್ರಾಫಿಕ್ ಇಲ್ಲದೆ ಸವಾರಿ ಮಾಡಿ ಮನಸ್ಸಿಗೆ ಬೋರ್ ಆಯಿತು, ಜನಜಂಗುಳಿ/ಹಾರ್ನ್ ಇಲ್ಲದೆ , 10 - 10 ನಿಮಿಷ ಸಿಗ್ನಲ್ಳಲ್ಲಿ ನಿಲ್ಲದೆ ಬೆಂಗಳೂರಲ್ಲಿ ಬಸ್ಸು ಪ್ರಯಾಣ ವಿಲರಾಳವೇ ಸರಿ. ನಿರ್ಧರಿಸಿದಂತೆ MG ರೋಡ್ ನಿಂದ ಭೈರಪ್ಪನ ಹಳ್ಳಿ ಕಡೆಗೆ ಪ್ರಯಾಣ ಮಾಡಿ, ಜನಮನ ಅರಿವು ಮಾಡಿಸಿಕುಂಡು, ಮತ್ತೆ ಪುನಃ ಮೈಸೂರ್ ರೋಡ್ ಕಡೆ ಪ್ರಯಾಣ ಮಾಡಿ ರೆಡ್ ಲೈನ್ ಮೆಟ್ರೋ ಸವಾರಿ ಮುಗಿಸಿದೆ . ಅನೇಕರೊಂದಿಗೆ ಬೇರೆ ಬೇರೆ ವಿಷ್ಯದ ಬಗ್ಗೆ ಚರ್ಚೆ , ತಿಳುವಳಿಕೆ ಪಡೆದು, ಪಯಣ ಮುಂದುವರಿಸುತ್ತಾ ನಾಡ ಪ್ರಭು ಕೆಂಪೇ ಗೌಡ ಸ್ಟೇಷನನ್ನು ತಲುಪಿ , Perple ಮೆಟ್ರೋ ಲೈನ್ ಕನೆಕ್ಟ್ ಮಾಡಿದೆ .ಇನ್ನೂ ಜನರನ್ನು ಭೇಟಿ ಮಾಡುವ ತವಕದಲ್ಲಿ ಚಿಕ್ಪೇಟೆ ಮೆಟ್ರೋ ಸ್ಟೇಷನಲ್ಲಿ ಇಳಿದು ಊರಿಡೀ ಸುತ್ತಾಡಿದೆ
ಊರಿಡೀ ಟ್ರಾಫಿಕ್ ಇಲ್ಲದಿದ್ರೂ, ಚಿಕ್ಪೇಟೆಯಲ್ಲಿ ಕಾಲಿಡಲು ಜಾಗವಿಲ್ಲ, ಮನೆಯ ಸಾಮಗ್ರಿಗಳು,ಕಳ್ಳ ಮಾಲುಗಳು, ಸುಳ್ಳುಮಾಲುಗಳು( ಕಾಪಿ ಅಂಡ್ ಡೂಪ್ಲಿಕೇಟ್ ಪ್ರಾಡಕ್ಟ್ಸ್), ಸೆಕೆಂಡ್ ಹ್ಯಾಂಡ್ ಪ್ರಾಡಕ್ಟ್ಸ್, ಸೀರೆಗಳು, ಆಭರಣಗಳು , ಅದರೊಂದಿಗೆ ಗಣಪತಿ ವಿಸರ್ಜನೆಯ ಕಾರ್ಯಕ್ರಮಗಳು. ರಸ್ತೆಯೆಲ್ಲಿದೆ, ಕೊಂಪೆಯೆಲ್ಲಿದೆಯೆಂದು ಹುಡುಕಾಡುವ ವಾಹನದಾರರು, ರಸ್ತೆ ಬದಿಯಲ್ಲಿ ವೆಹಿಕಲ್ ಪಾರ್ಕ್ ಮಾಡಿರುವ ಆರಕ್ಷಕರು, ಎಲ್ಲೆಂದಲ್ಲಿ ಒರಿಜಿನಲ್ ಸ್ಯಾಮ್ಸಂಗ್ ಪವರ್ ಬ್ಯಾಂಕ್ ಮತ್ತು ಫಾಸ್ಟ್ರಾಕ್ ವಾಚ್ಗೆ ಮಾರುತ್ತಿರುವ ಹೆಣ್ಮಕ್ಕಳಲ್ಲಿ ಚರ್ಚೆ ಮಾಡುತ್ತಿರುವ ಗಂಡು ಹುಡುಗರು, ಗಣಪತಿ ಹೆಸರಲ್ಲಿ ಅನ್ನದಾನ ಹೆಸರಲ್ಲಿ ಅನ್ನ ಪೋಲು ಮಾಡುತ್ತಿರುವ ಭಕ್ತರು, ಪಾರ್ಕಿಂಗ್ ಜಾಗ ಹುಡುಕಾಡುವ ಜೋಡಿ ಹಕ್ಕಿಗಳು etc
ಪ್ರಯಾಣ ಮುಂದುವರಿಸಿ ಎಚ್ಚೆಯೇನೆಯಲ್ಲಿ ಕಡೆಯಿಂದ ನಾಗಸಂದ್ರದವರೆಗೆ ಪಯಣ. ನಡುವಲ್ಲಿ ತುಂಬಾ ಜನರೊಂದಿಗೆ ಸಂವಾದ/ ಚರ್ಚೆ. ದಾಸರಲ್ಲಿ ತಲುಪಿದಾಗ ಎಲ್ಲೋ ಮಾತೃ ಭಾಷೆ ಮಾತು ಕೇಳಿದಂತಾಯಿತು . ಮಂಗಳೂರಿನ ಎರಡು ಕುಟುಂಬದವರು ನನ್ನ ಪಕ್ಕದಲ್ಲೇ ಕುಳಿತು ತುಳುವಿನಲ್ಲಿ ಮಾತಾಡುವುದನ್ನು ಕೇಳಿ ಕಿವಿ ಇಂಪಾಯಿತು. ಪ್ರಯಾಣದಲ್ಲಿ ಮುದ್ದು ಮಗುವೊಂದು ಅಪ್ಪನಲ್ಲಿ ಕೇಳುತ್ತಿತ್ತು " ಬೆಂಗಳೂರಲ್ಲಿ ೧೦೦೦ ಮನೆ ಇರಬಹುವುದೇ? ಪಕ್ಷಿಗಳು ಮೋಡ ಮುಟ್ಟುತವೆಯಾ? ನನಗೆ ಯಾಕೆ ಹಾರಡಲು ಸಾಧ್ಯವಿಲ್ಲಾ ? etc, ತುಂಬಾ ಕುತೂಹಲಕಾರಿಯಾದ ಈ ಮಾತುಗಾರಿಕೆ , ನಾನು ಲಾಲ್ಭಾಗ್ ಸ್ಟೇಷನಲ್ಲಿ ಇಳಿದಾಗ ಕೇವಲ ನೆನಪಿನಂಚಿನಲ್ಲಿ ಕಳೆದು ಹೋಹಿತು.
ಲಾಲ್ ಬಾಗ್ ಬೆಂಗಳೂರಿನ ಉಳಿದ ಕೆಲವೊಂದು ಸಸ್ಯಕಾಶಿಗಳಲ್ಲಿ ಒಂದು . ಮಳೆರಾಯ ಜೋರಾಗಿ ನನ್ನನ್ನು ಸ್ವಾಗತ ಮಾಡಿತು. ಗಣಪತಿಯನ್ನು ನೀರಲ್ಲಿ ವಿಸರ್ಜನೆ ಮಾಡಿ ಶುದ್ಧಿಯಿರುವ ಕೆರೆಯನ್ನು ಇನ್ನಷ್ಟು ಶುದ್ದಿಸಲು ಹೋರಾಟ ಅದೇಷ್ಟೋ ಭಕ್ತರು, ವಾರಾಂತ್ಯ ಸಮಯ ಕಳೆಯಲು ಬಂದಿರುವ ಅದೆಷ್ಟೋ ಕುಟುಂಬಗಳು, ಮೂಲೆ ಮೂಲೆಯನ್ನು ಹುಡುಕುತ್ತಿರುವ ಯುವ ಜೋಡಿಗಳು, ಇಂದಿಗೂ ವಿದೇಶಿಯರನ್ನು ನೋಡಿ ಅಚ್ಚರಿ ಪಡುವ ಬಾರತೀಯರು, ಅದರಲ್ಲೂ ಸೆಲ್ಫಿ ವಿಥ್ ಫಾರಿನರ್ಸ್ ಅಂತೂ ವಿಶೇಷ ಕಂಡಿತು, ಪಕ್ಷಿಗಳ ಕಲರವ, ಪ್ರಾಣಿಗಳ ಆಕೃತಿಯ ಗಿಡಗಳು ಮನಮೋಹಿಸಿತು.
ಮೆಟ್ರೋ ಪ್ರಯಾಣದುದ್ದಕ್ಕೂ ನಾನು ಎಲ್ಲರನ್ನು ಗಮನಿಸುತ್ತಿದೆ - ear ಫೋನ್ ಆಕಿಕೊಂಡು ಬ್ಯುಸಿ ಆಗಿರುವ ಲಲನೆಯರು, ಆಯಾಸತಿಂದ ನಿದ್ರೆ ಮಾಡುವ ಗಂಡು ಹುಡುಗರು, ಪಿಕ್ನಿಕ್ ಸ್ಪಾಟ್ ತರ ಕುಟುಂಬಗಳ ಮೆಟ್ರೋ ಪ್ರಯಾಣ, ಮಕ್ಕಳ ಓಡಾಟ / ಕಿರುಚಾಟ , ಜೋಡಿ ಹಕ್ಕಿಗಳ ತುಂಟಾಟ, ಹಿರಿ ವಯಸ್ಸಿಗರ ಚರ್ಚೆಗಳು, ಮಯಿಳಾ ಮಣಿಗಳ ಸೀರೆ/ ಬಂಗಾರದ ಮಾತುಗಳು ತುಂಬಾ ಸ್ವಾರಸ್ಯಕರವಾಗಿತ್ತು. ಇದೆಲ್ಲದೊರೊಂದಿಗೆ ಯಾವ ರೀತಿ ಮೆಟ್ರೋದ ಸೆಕ್ಯೂರಿಟಿ ಕೆಲಸ ಮಾಡುವ ಕಾರ್ಮಿಕರಿಗೆ ಅವರ ಕಂಟ್ರಾಕ್ಟರ್ ಯಾವ ರೀತಿ ಹಕ್ಕಿನ ವಾರದ ರಜೆ ನೀಡದೆ, ಗಳಿಕೆ ರಜೆಯನ್ನು ಮರೀಚಿಕೆ ಮಾಡಿ, OT ಮಾಡಿಯೂ ಸರಿಯಾದ ಓಟ್ ಸಂಬಳ ಕೊಡದೇ ಪೀಡನೆ ಕೊಡುತ್ತಿದ್ದಾರೆ ಎನ್ನುವ ವಿಚಾರ ಕೂಡ ತಿಳಿಯಿತು
ಜನ ಮನದ ಸುದ್ದಿ ಸಮಾಚಾರಗಳು:
- ಜನಸಾಮನ್ಯನ ಪ್ರಕಾರ ಇಂದಿರಾ ಕ್ಯಾಂಟೀನ್ಗಳು ಕೇವಲ ರಾಜಕೀಯ ಬೇಯಿಸಲು ಮಾಡಿರುವ ಕಾರ್ಯಕ್ರಮ. ತಿಂಡಿ ತಿನಿಸು ಗುಣಮಟ್ಟ ತುಂಬಾ ಕಳಪೆಯಾಗಿದೆ ಮತ್ತು ಇದು 200 ಜನಕ್ಕೆ ಕೂಡ ಸಿಗಲ್ಲ....
- ಸ್ವಚ್ಛ ಭಾರತ ಬಗ್ಗೆ ಅರಿವು ಇದ್ದರು, ಸಾರ್ವಜನಿಕ ಸ್ಥಾನದಲ್ಲಿ ಕೆಲವೊಮ್ಮೆ ಧ್ಯಾನ ಕೊಡುವುದಿಲ್ಲ
- ರಾಜ್ಯ ಸರ್ಕಾರದ ಯಾವುದೇ ಭಾಗ್ಯ ಯೋಜನೆಗಳ ಬಗ್ಗೆ ಜನರಿಗೆ ಅರಿವೇ ಇಲ್ಲ.
- ಮೆಟ್ರೋ ಚಾಲನೆ ಎಲ್ಲಾ ವರ್ಗದ ಜನರಿಂದ ಪ್ರಶಂಸೆ ಪಡಯುತಿದೆ, ಕೇವಲ ಒಂದು ಕೋರಿಕೆ ಎಂದರೆ ಫೀಡರ್ ಬಸ್ ವ್ಯವಸ್ಥೆಯನ್ನು ಇನ್ನೂ ಎಚ್ಚಿನ ಸ್ಥಳಕ್ಕೆ ಒದಗಿಸಬೇಕೆಂದು.
- ಬಿಬಿಎಂಪಿ ಪ್ರಕಾರ ಪ್ರತಿ ಕಿಲೋ ಮೀಟರ್ ಗೇ ಎರಡು ಹೊಂಡ ಇದೆ ಅಂತೇ, ಜನ ಸಾಮಾನ್ಯನ ಪ್ರಕಾರ ರಸ್ತೆಯಲ್ಲ ಕೇವಲ ಹೊಂಡಮಯ
- ಬಿಬಿಎಂಪಿ ಅಧಿಕಾರಿಗಳು ಪ್ರಕರ್ತಿ ದುರ್ಗಟನೆ ನಿಭಾಯಿಸಲು ದಕ್ಷರಲ್ಲ
- ಮುಂದಿನ ಚುನಾವಣೆಯನ್ನು ಯಾವ ಪಕ್ಷ ಕೂಡ ಗೆಲ್ಲ ಬಹುದು. ಉಪೇಂದ್ರರ ರಾಜಾಕೀಯ ಪಕ್ಷದಬಗ್ಗೆ ಅರಿವೇ ಇಲ್ಲ.
- ಜನರೊಂದಿಗಿನ ಒಡನಾಟ, ಪದೇ ಪದೇ ಬರುರುತಿದ್ದ ತುಂತುರು ಮಳೆ, ಸರ್ವಾಜನಿಕ ವಾಹನದಲ್ಲಿನ ಪ್ರಯಾಣ, ರಸ್ತೆ ಬದಿಯ ತಿಂಡಿ ತಿನಿಸುಗಳು, ಹೊಂಡಮಯ ರಸ್ತೆಗಳು etc etc ಈ ಜನಮನದ ಪ್ರಯಾಣವನ್ನು ಮರೆಯಲಾಗದಂತೆ ಮಾಡಿತು.
ಸೊಗಸಾಗಿದೆ ಲೇಖನ!
ReplyDelete